ಕಥಾ ಕೋಶಕ್ಕೆ ಹಾರ್ದಿಕ ಸ್ವಾಗತ.
ಬನ್ನಿ ಎಲ್ಲಿ ಪದಗಳು ಮಾಂತ್ರಿಕ ಲೋಕ ಸೃಷ್ಟಿಸಿ, ಭಾವನೆಗಳನ್ನು ಪುಟದ ಮೇಲೆ ಕುಣಿಯುವಂತೆ ಮಾಡಿ ನಮ್ಮನ್ನು ಕಲ್ಪನಾ ಲೋಕಕ್ಕೆ ಒಯ್ಯುವದೋ ಆ ಜಾಗಕ್ಕೆ ಬನ್ನಿ! ಇದು ಕಥೆಗಳ ಆಗರ.
ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲ್ಪಟ್ಟ, ರಾತ್ರಿ ಚಳಿಯಲ್ಲಿ ಬೆಂಕಿಯ ಸುತ್ತ ಕುಳಿತು ಹೇಳಿದ, ಪುಸ್ತಕಗಳಲ್ಲಿ, ತಾಳೆ ಗರಿಗಳಲ್ಲಿ ಬರೆಯಲ್ಪಟ್ಟ ರೋಚಕ ಕಥೆಗಳನ್ನು ಇಲ್ಲಿ ಓದೋಣ.
ವಿವಿಧ ರೀತಿಯ ಕಥೆಗಳು, ವಿಚಿತ್ರ ಜೀವಿಗಳು ಓಡಾಡುತ್ತಿರುವ ಕಾದಂಬರಿಯಿಂದ ಹಿಡಿದು ನಿಜ ಜೀವನದ ಸಾಹಸಗಾಥೆಯವೆರೆಗೆ, ಪ್ರತಿ ಕಥೆ ನಿಮ್ಮನ್ನು ಬೇರೆಯದೇ ಲೋಕಕ್ಕೆ ಒಯ್ಯಲಿವೆ. ಹೊಸ ಅಸಾಧಾರಣ ಅನುಭವ ನೀಡಲಿವೆ.
ನಮ್ಮ ಈ ಡಿಜಿಟಲ್ ಶಿಬಿರಾಗ್ನಿಯು ಮನೋರಂಜನೆ ನೀಡಿ ಚಿಂತನೆಯನ್ನು ಕೆಣಕುವ ಕಥೆಗಳಿಂದ ಬೆಳಗಲಿವೆ.
ಮರೆಯಲಾಗದ ಪಾತ್ರಗಳು, ಅಚ್ಚರಿ ಹಾಗೂ ತಿರುವಿನಿಂದ ಕೂಡಿದ ಕಥಾ ಹಂದರಗಳು ಮತ್ತು ಕಥೆಯ ಭಾವನೆಗಳ ಸಾಗರದಲ್ಲಿ ಮುಳುಗುವ ಈ ಅವಕಾಶವನ್ನು ತಪ್ಪಿಸಿಕೊಳ್ಳದಿರಿ.
ಮನಸ್ಸನ್ನು ರಂಜಿಸುವದರ ಜೊತೆಗೆ ನೀತಿಯನ್ನು, ಸ್ಪೂರ್ತಿಯನ್ನು ಕೂಡಾ ಈ ಕಥೆಗಳು ನೀಡಲಿವೆ.
ಕನಸುಗಳು ತೆರೆಯಲ್ಪಡುವ ಈ ಸುಂದರ ಕಥಾ ಲೋಕಕ್ಕೆ ಸ್ವಾಗತ!
ನೆನಪಿಡಿ ಕಥಾ ಕೋಶ ಬ್ಲಾಗ್ ಮಸ್ತಕಮಣಿ.ಕಾಂ ವೆಬ್ ತಾಣದ ಮಣಿಗಳಲ್ಲಿ ಒಂದಾಗಿದೆ. ಉಳಿದ ಮಣಿಗಳನ್ನು ನೋಡಲು ಮಸ್ತಕಮಣಿ.ಕಾಂ ತಪ್ಪದೇ ಭೇಟಿ ನೀಡಿ.
ಇಂತಿ ನಿಮ್ಮ
--ಕಥಾ ಕೋಶ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ